Saturday 19 September 2020

       ಒಂದು 


ಭಗವಂತ ನಮಗೆ ಕೊಟ್ಟಿರುವ ಅತಿ ಉನ್ನತ ಉಡುಗೊರೆಯೇ ನಮ್ಮ ಎರಡು ಕಣ್ಣುಗಳು. ಹೇಗೆಂದು ಕೇಳುವಿರ? ಉತ್ತರ ಇಲ್ಲಿದೆ .ನನಗೆ ಕಿವಿಗಳು ಸರಿಯಾಗಿ ಕೇಳಿಸುತ್ತಿಲ್ಲ. ತೊಂದರೆಯಿಲ್ಲ.ಜಾಸ್ತಿ ಮಾತನಾಡಲು ಆಗುತ್ತಿಲ್ಲ.ಯಾವ ಸಮಸ್ಯೆಯೂ ಇಲ್ಲ.ಎರಡುಕಣ್ಣುಗಳು ಸರಿಯಾಗಿದ್ದರೆ ಏನ್ನನ್ನೂ ಬೇಕಾದರೆ ಓದಬಹುದು.ಮನಸ್ಸನ್ನು ಹಗುರಗೊಳಿಸಬಹುದು. ಪುಸ್ತಕವನ್ನು ಓದಿ ಆನಂದಪಡಬಹುದು. ದಿನ ಪತ್ರಿಕೆ ಹಾಗು ಇತರ ಪತ್ರಿಕೆಗಳನ್ನೂ ಓದಬಹುದು. 


ಮೂಷಿಕ ದೂರವಾಣಿ (ಮೊಬೈಲ್ ಫೋನ್ ) ಬಹಳ ಉಪಯೋಗಿಸುತ್ತೇವೆ . ಇದರಿಂದ ನಮ್ಮ ನಮ್ಮ ಕಣ್ಣುಗಳಿಗೆ ಬಹಳ ಹಾನಿಯಾಗುತ್ತದೆ. ಇದರ ಪರದೆಯ ಅಳತೆ ಸಣ್ಣದು.ಕೇವಲ ದೂರವಾಣಿ ಕರೆಗಳಿಗೆ ಇದನ್ನು ಉಪಯೋಗಿಸಿದರೆ ಒಳ್ಳೆಯದು. ಸಾಮಾಜಿಕ ಜಾಲತಾಣಗಳನ್ನೂ ಸದಾಕಾಲವೂ ನೋಡುತಿದ್ದರೆ, ನಮ್ಮಕಣ್ಣುಗಳು ಏನಾಗಬೇಕು?


ಪರಿಸ್ಥಿತಿ ಕೈ ಮೀರುವಮುಂಚೆ ಎಚ್ಚೆತ್ತಿಕೊಂಡರೆ ನಮ್ಮ ಕಣ್ಣುಗಳನ್ನು ಕಾಪಾಡಿಕೊಳ್ಳಬಹುದು.ಸಾಮಾಜಿಕಜಾಲತಾಣ ಹಾಗು ಇತರ ತಾಣಗಗಳ್ನ್ನುನೋಡಲು ದೊಡ್ಡ ಪರದೆ ಇರುವ ಗಣಕ ಯಂತ್ರ  ದೂರದರ್ಶನವನ್ನು ಉಪಯೋಗಿಸಿ.